ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರಗಳು ಬಿಡುಗಡೆಯಾಗುತ್ತಿದೆ ಅಂದ್ರೆ ಖಾಸಗಿ ಕಂಪನಿಗಳು, ಖಾಸಗಿ ಶಾಲೆಗಳು ಸ್ವಯುತ್ತವಾಗಿ ರಜೆ ನೀಡುವುದನ್ನ ನೋಡಿದ್ದೀವಿ. ಇನ್ನು ಅಭಿಮಾನಿಗಳು ತಿಂಗಳು ಮುಂಚೆಯೇ ರಜೆ ಕೇಳಿ ಮನವಿ ಮಾಡುವುದನ್ನ ಕೇಳಿದ್ದೀವಿ. ಇದೀಗ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ನೋಡುವ ಕಾರಣದಿಂದ ಕಾಲೇಜಿನಲ್ಲಿ ರಜೆ ಕೋರಿ ವಿದ್ಯಾರ್ಥಿಯೊಬ್ಬರು ಪತ್ರ ಬರೆದಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.